Tuesday 7 April 2015

ಕರ್ನಾಟಕ ಜಾತಿ ಹಾಗೂ ಶೈಕ್ಷಣಿಕ ಗಣತಿ-2015( ಎಪ್ರಿಲ್ 11 ರಿಂದ 30)

ದಯವಿಟ್ಟು ಈ ಸಂದೇಶವನ್ನು  ಓದದೆ ಡಿಲೀಟ್ ಮಾಡಬೇಡಿ. ಎಲ್ಲರಿಗೂ ತಲುಪಿಸಿ. 

ಕರ್ನಾಟಕ  ಜಾತಿ ಹಾಗೂ ಶೈಕ್ಷಣಿಕ ಗಣತಿ-2015( ಎಪ್ರಿಲ್ 11 ರಿಂದ 30):

ಕರ್ನಾಟಕ  ಸರಕಾರವು ರಾಜ್ಯ ಮಟ್ಟದಲ್ಲಿ ಸಾರ್ವತ್ರಿಕ ಸಮೀಕ್ಷೆಯೊಂದನ್ನು ನಡೆಸಲು ತೀರ್ಮಾನಿಸಿದೆ. ಈಗ ಸಮೀಕ್ಷೆ ಎಪ್ರಿಲ್ 11 ರಂದು ಆರಂಭವಾಗಿ ಎಪ್ರಿಲ್ 30 ರಂದು ಮುಗಿಯಲಿದೆ. ನಮ್ಮ ದೇಶದಲ್ಲಿ 1931 ರ ಬಳಿಕ ಇಂತಹ ಸಮೀಕ್ಷೆಯೊಂದು ನಡೆಯುತ್ತಿರುವುದು ಇದೇ ಮೊದಲ ಬಾರಿ. ಸಮೀಕ್ಷೆಗಾಗಿ ನಿಯುಕ್ತ ಅಧಿಕಾರಿಗಳು 55 ಪ್ರಶ್ನೆಗಳಿರುವ ಒಂದು ಪ್ರಶ್ನಾವಳಿಯೊಂದಿಗೆ ಪ್ರತಿಯೊಬ್ಬರ ಮನೆಗೆ ಭೇಟಿ ನೀಡಲಿದ್ದಾರೆ.
ಯಾವ ಸಮುದಾಯ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಯಾವ ಸ್ಥಿತಿಯಲ್ಲಿವೆ ಎಂಬುದನ್ನು ನಿರ್ಧರಿಸಲು ಈ ಸಮೀಕ್ಷೆಯು ಆಧಾರವಾಗಲಿದೆ. ಮುಂದಿನ ದಿನಗಳಲ್ಲಿ ಸರಕಾರವು ಘೋಷಿಸುವ ವಿವಿಧ ಕಲ್ಯಾಣ ಕಾರ್ಯಕ್ರಮಗಳು, ಮೀಸಲಾತಿ, ವಿನಾಯಿತಿ ಇತ್ಯಾದಿ ಸವಲತ್ತುಗಳಿಗೆ ಈ ಸಮೀಕ್ಷೆಯ ಮೂಲಕ ಸಿಗುವ ಮಾಹಿತಿಗಳೇ ಆಧಾರವಾಗಲಿದೆ. ಇದು ರಾಜ್ಯದ ಮುಸ್ಲಿಂ ಅಲ್ಪಸಂಖ್ಯಾತರ ಪಾಲಿಗೆ ಒಂದು ಅತ್ಯಮೂಲ್ಯ ಅವಕಾಶವಾಗಿದೆ. ಈ ಮೂಲಕ ಅವರು ತಮ್ಮ ಸಮಾಜದ ಹೀನಾಯ ಆಥಿ೯ಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ಸರಕಾರದ ಗಮನಕ್ಕೆ ತರಬಹುದಾಗಿದೆ. ಆದ್ದರಿಂದ ಸಮುದಾಯದ ಎಲ್ಲಾ ಬಾಂಧವರು ಈ ಸಮೀಕ್ಷೆಯಲ್ಲಿ ಆಸಕ್ತಿ ವಹಿಸಿ ಇದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸಮಾಜದ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರು ಈ ಕುರಿತು ಸಮುದಾಯದ ಎಲ್ಲಾ ಸದಸ್ಯರಿಗೆ ಅವಶ್ಯಕ ಮಾಹಿತಿಗಳನ್ನು ಒದಗಿಸಿ ಅವರಲ್ಲಿ ಜಾಗೃತಿ ಬೆಳೆಸಬೇಕು. ಪ್ರಶ್ನಾವಳಿಯಲ್ಲಿರುವ ಎಲ್ಲಾ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಬೇಕು.

ವಿಶೇಷ ಸೂಚನೆ:
ಸಾಧ್ಯವಾದಲ್ಲಿ ಪ್ರತಿಯೊಂದು ಮಸೀದಿಯ ವ್ಯಾಪ್ತಿಗೆ ಬರುವ ಮುಸ್ಲಿಂ ಸದಸ್ಯರನ್ನೆಲ್ಲಾ ಒಂದೆಡೆ ಜಮಾಯಿಸಿ ಅವರಿಗೆ ಪ್ರಶ್ನಾವಳಿಯನ್ನು ತುಂಬುವ ಕುರಿತು ಪ್ರಾಥಮಿಕ ತರಬೇತಿ ನೀಡಬೇಕು.
ಸಮೀಕ್ಷಾ ಅಧಿಕಾರಿಗಳ ಜೊತೆ ಸಾಮಾಜಿಕ ಕಾರ್ಯಕರ್ತರು ಮನೆಮನೆಗೆ ಹೋದರೆ ಇನ್ನೂ ಉತ್ತಮ
ದ.ಕ ಜಿಲ್ಲೆಯ ಎಲ್ಲಾ ಬ್ಯಾರಿ ಸಮುದಾಯದವರು (ಬ್ಯಾರಿ ಮತ್ತು ಮಾಪಿಳ್ಳ ಭಾಷೆ ಮಾತನಾಡುವವರು) ಪ್ರಶ್ನಾವಳಿಯ ಈ ಕೆಳಗಿನ ಪ್ರಶ್ನೆಗಳಿಗೆ ಹೀಗೆ ಉತ್ತರಿಸಬೇಕೆಂದು ನಮ್ಮ ವಿನಂತಿ.
ಪ್ರಶ್ನಾವಳಿ ಸಂಖ್ಯೆ:ಪ್ರಶ್ನೆ,: ಉತ್ತರ: ಕೋಡ್
 5 : ಧರ್ಮ : ಇಸ್ಲಾಂ: 02
6 : ಜಾತಿ : ಮುಸ್ಲಿಂ : 0862
7 : ಉಪಜಾತಿ: ಬ್ಯಾರಿ ಮುಸ್ಲಿಂ: 0218
10 : ಮಾತೃಭಾಷೆ : ಬ್ಯಾರಿ : 12 , ಉರ್ದು  ಆಗಿದ್ದರೆ (ಕೋಡ್ 03)

ಮನೆಯಲ್ಲಿ ಸಿದ್ಧವಾಗಿ ಇಟ್ಟುಕೊಳ್ಳಬೇಕಾದ ಪ್ರಮುಖ ದಾಖಲೆಗಳು ಮತ್ತು ಮಾಹಿತಿಗಳು
ರೇಷನ್ ಕಾರ್ಡ್  * ಆಧಾರ್ ಕಾರ್ಡ್  (ಇದ್ದಲ್ಲಿ)  * ವೋಟರ್ ಐ.ಡಿ   * ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಇದ್ದಲ್ಲಿ)    * ಶಾಲೆಯ ಮಾಹಿತಿ  *  ಜಮೀನಿನ ಬಗ್ಗೆ ಮಾಹಿತಿ * ಸರಕಾರದಿಂದ ಪಡೆದ ಸವಲತ್ತುಗಳ ಬಗ್ಗೆ ಮಾಹಿತಿ * ಶೈಕ್ಷಣಿಕ ಸೌಲಭ್ಯಗಳ ಮಾಹಿತಿ * ಮದುವೆಯಾದ ವಯಸ್ಸಿನ ಬಗ್ಗೆ ಮಾಹಿತಿ
* ಜಾನುವಾರುಗಳ ಬಗ್ಗೆ ಮಾಹಿತಿ * ಸ್ಥಿರ ಮತ್ತು ಚರ ಆಸ್ತಿಗಳ ಬಗ್ಗೆ ಮಾಹಿತಿ

ಗಮನಿಸಬೇಕಾದ ಅಂಶಗಳು:
* ಸಮೀಕ್ಷಾದಾರರು ಫಾರO ಪೆನ್ ಬಳಸಿ ಭರ್ತಿ ಮಾಡುತ್ತಿದ್ದಾರೆಯೇ ಎಂದು ಗಮನಿಸುವುದು.  ಇಲ್ಲವಾದಲ್ಲಿ ಪೆನ್ ಬಳಸುವಂತೆ ಸೌಜನ್ಯತೆಯಿಂದ ವಿನಂತಿಸುವುದು.
* ಸಮೀಕ್ಷೆಗೆ ಬರುವ ಅಧಿಕಾರಿಗಳು ಕೇಳುವ ಪ್ರಶ್ನೆಗಳು ಸರಿಯಾಗಿ ಅರ್ಥವಾಗದೇ ಇದ್ದಲ್ಲಿ ಮತ್ತೊಮ್ಮೆ ಸೌಜನ್ಯದಿಂದ ಕೇಳಿ ತಿಳಿದುಕೊಳ್ಳಿ.
* ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಕೋಡ್/ಉತ್ತರವನ್ನು ತುಂಬಿದ್ದಾರೆಯೇ ಎಂದು ಪರಿಶೀಲಿಸಿದ ನಂತರವೇ ಕುಟುಂಬದ ಮುಖ್ಯಸ್ಥರು/ಮಾಹಿತಿದಾರರು ಸಹಿ ಹಾಕುವುದು.

ಈ ಸಂದೇಶವನ್ನು ಎಲ್ಲರಿಗೂ ತಲುಪಿಸಿ.

No comments:

Post a Comment